Header Ads

ದೇಶದಲ್ಲಿ ಪ್ರಥಮವಾಗಿ ಬೆಂಗಳೂರಿನಲ್ಲಿ 4G ಸೇವೆ ಆರಂಭಿಸಿದ ಬಿಎಸ್ಎನ್ಎಲ್

ಖಾಸಗಿ ಕಂಪನಿಗಳೊಂದಿಗೆ ಈಗಾಗಲೇ ದರ ಸಮರಕ್ಕೆ ಇಳಿದಿದ್ದ ಬಿಎಸ್ಎನ್ಎಲ್, 4G ಸೇವೆಯನ್ನು ಪ್ರಾರಂಭಿಸಿದ ಮೇಲೆ ಸ್ಪರ್ಧೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಕೆ ಲಾಭವಾಗುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ.


ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ 4G ಸೇವೆಯನ್ನು ಆರಂಭಿಸಿದೆ. ದೇಶದಲ್ಲಿರುವ ಎಲ್ಲಾ ಮೊಬೈಲ್ ನೆಟ್‌ವರ್ಕ್ ಕಂಪನಿಗಳು ಈಗಾಗಲೇ 4G ಸೇವೆಯನ್ನು ಆರಂಭಿಸಿದ್ದು, ಬಿಎಸ್ಎನ್ಎಲ್ ತಡವಾಗಿಯಾದರು 4G ಸೇವೆಗೆ ಚಾಲನೆ ನೀಡಿದೆ.
BSNL to Start 4G Service in Bangalore | TekkiPedia
BSNL to Start 4G Service in Bangalore


ಖಾಸಗಿ ಕಂಪನಿಗಳೊಂದಿಗೆ ಈಗಾಗಲೇ ದರ ಸಮರಕ್ಕೆ ಇಳಿದಿದ್ದ ಬಿಎಸ್ಎನ್ಎಲ್, 4G ಸೇವೆಯನ್ನು ಪ್ರಾರಂಭಿಸಿದ ಮೇಲೆ ಸ್ಪರ್ಧೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಕೆ ಲಾಭವಾಗುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ 4G ಸೇವೆಗೆ ಚಾಲನೆ ನೀಡಿದರುವ ಬಿಎಸ್ಎನ್ಎಲ್, ರಾಜ್ಯದ 6 ಸಾವಿರ ಗ್ರಾಮಪಂಚಾಯತಿಗಳಲ್ಲಿ ಸುಮಾರು 4600 ಗ್ರಾಮಪಂಚಾಯತಿಗಳು ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಉಳಿದ ಪಂಚಾಯತಿಗಳಿಗೂ ಈ ಸೇವೆಯನ್ನು ವಿಸ್ತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ.

ಅಲ್ಲದೇ ಬಿಎಸ್ಎನ್ಎಲ್ ಸದ್ಯದ ಪರಿಸ್ಥತಿಯಲ್ಲಿ ಲಾಭದಲ್ಲಿದ್ದು, ಜಿಯೋ ಆರಂಭವಾದ ಮೇಲೆ ಶುರುವಾದ ದರ ಸಮರದಿಂದ ಮತ್ತಷ್ಟು ಲಾಭ ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ 4G ಸೇವೆ ಪಡೆಯಲು ಮತ್ತಷ್ಟು ಗ್ರಾಹಕರು ಬಿಎಸ್ಎನ್ಎಲ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಖಾಸಗಿ ಕಂಪನಿಗಳಿಗೆ ಸರಕಾರಿ ವಲಯದ ಕಂಪನಿಯೊಂದು ಸ್ಪರ್ಧೇ ನೀಡುತ್ತಿರುವುದು ಉತ್ತಮ ಸಂಗತಿ. ಬಿಎಸ್ಎನ್ಎಲ್ ಉತ್ತಮ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ನೀಡಲಿ ಎನ್ನುವುದು ಆಶಯ.


Source: http://kannada.gizbot.com



Powered by Blogger.