Header Ads

ಸದ್ಯದಲ್ಲೇ ಬರಲಿದೆ ಬಿಎಂಡಬ್ಲ್ಯು ಹಾರುವ ಬೈಕ್ - ವಿಶೇಷತೆ

ಆಟೋಮೊಬೈಲ್ ಉದ್ಯಮದಲ್ಲಿ ದಿನೇ ದಿನೇ ಹೊಸ ಹೊಸ ತಂತ್ರಜ್ಞಾನಗಳು ಪರಿಚಯವಾಗುತ್ತಲೇ ಇರುತ್ತವೆ. ಅಂತಯೇ ಹೊಸ ಆವಿಷ್ಕಾರಗಳೊಂದಿಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಹಾರುವ ಬೈಕ್ ಭಾರೀ ಕುತೂಹಲ ಹುಟ್ಟಿಸಿದೆ.

ಬಿಎಂಡಬ್ಲ್ಯು ಹಾರುವ ಬೈಕ್ | BMW Lego R 1200 GS Hover Bike | TekkiPedia
ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು, ಅತ್ಯದ್ಭುತ ಸಾಹಿಸಿ ಬೈಕ್‌ವೊಂದನ್ನು ಆವಿಷ್ಕಾರ ಮಾಡಿದೆ. ಲೆಗೋ ಕಂಪನಿಯ ಹೊವರ್ ಬೈಕ್ ಸ್ಪೂರ್ತಿಯೊಂದಿಗೆ ಸಿದ್ಧಗೊಂಡಿರುವ BMW ಆರ್ 1200 ಜಿಎಸ್ ಹಲವು ಕೌತುಕಗಳ ಆಗರವಾಗಿದೆ.
ಬಿಎಂಡಬ್ಲ್ಯು ಹಾರುವ ಬೈಕ್ | BMW Lego R 1200 GS Hover Bike | TekkiPedia

ಈ ಹಿಂದೆ ಹೂವರ್ ಬೈಕ್ (ಹಾರುವ ಬೈಕ್) ನಿರ್ಮಾಣ ಮಾಡಿ ಸೈ ಎನ್ನಿಸಿಕೊಂಡಿದ್ದ ಲೆಗೋ ಇದೀಗ ಮತ್ತೆ ಸುದ್ಧಿಯಲ್ಲಿದೆ. 603-ಲೆಗೋ ಕಿಟ್‌ನೊಂದಿಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಆರ್ 1200 ಜಿಎಸ್ ಹಾರುವ ಬೈಕ್ ಕೂಡಾ ಬೈಕ್ ಪ್ರಿಯರ ಗಮನ ಸೆಳೆಯುತ್ತಿದೆ.
ಬಿಎಂಡಬ್ಲ್ಯು ಹಾರುವ ಬೈಕ್ | BMW Lego R 1200 GS Hover Bike | TekkiPedia
BMW ಆರ್ 1200 ಜಿಎಸ್ ಹಾರುವ ಬೈಕ್ ಮೂಲ ಲೆಗೋ ಟೆಕ್ನಿಕ್ ವಿನ್ಯಾಸದೊಂದಿಗೆ ಸಿದ್ಧಗೊಳಿಸಲಾಗಿದ್ದರು, ಎಂಜಿನ್ ಮತ್ತು ಜಿಎಸ್ ಪ್ರೋಫೈಲ್ ಅಂಶಗಳನ್ನು ಬಿಎಂಡಬ್ಲ್ಯು ಸಂಸ್ಥೆಯೇ ವಿನ್ಯಾಸಗೊಳಿಸಿದೆ. ಹೀಗಾಗಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಬೈಕ್ ಬೆಲೆಯನ್ನು ರೂ. 4026 ಗಳಿಗೆ ನಿಗದಿಗೊಳಿಸಲಾಗಿದೆ.
ಬಿಎಂಡಬ್ಲ್ಯು ಹಾರುವ ಬೈಕ್ | BMW Lego R 1200 GS Hover Bike | TekkiPedia

ಹತ್ತು ಹಲವು ಸಂಶೋಧನೆಗಳು ಮತ್ತು ಆವಿಷ್ಕಾರಗಳ ಫಲವಾಗಿ ಹಾರುವ ಬೈಕ್ ನಿರ್ಮಾಣವಾಗಿದ್ದು, 'ಹೂವರ್ ರೈಡ್ ಡಿಸೈನ್' ಪರಿಕಲ್ಪನೆ ಅಡಿ BMW ಆರ್ 1200 ಜಿಎಸ್ ಸಿದ್ಧಗೊಂಡಿದೆ. ಮ್ಯೂನಿಚ್‌ನ ಬಿಎಂಡಬ್ಲ್ಯು ಜೂನಿಯರ್ ಇಂಜನಿಯರ್ಸ್ ಇದನ್ನು ಆವಿಷ್ಕಾರ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಎಂಡಬ್ಲ್ಯು ಹಾರುವ ಬೈಕ್ | BMW Lego R 1200 GS Hover Bike | TekkiPedia

BMW ಆರ್ 1200 ಜಿಎಸ್ ಹಾರುವ ಬೈಕಿನ ವಿನ್ಯಾಸ ಅದ್ಭುತವಾಗಿದೆ. ಬೈಕಿನ ಮುಂಭಾಗ ಚಕ್ರವೇ ಪ್ರೊಪೆಲ್ಲರ್ ಆಗಿದ್ದು, ಎರಡು ಸಿಲಿಂಡರ್ ಎಂಜಿನ್ ಬೈಕ್ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಲೆಗೋ ಪರಿಕಲ್ಪನೆಯೊಂದಿಗೆ ಸಿದ್ಧಗೊಂಡಿರುವ BMW ಆರ್ 1200 ಜಿಎಸ್ ಹಾರುವ ಬೈಕ್, ಮೂವಿಂಗ್ ಹ್ಯಾಂಡಲ್ ಮತ್ತು ಹೊಂದಾಣಿಕೆಯ ಗಾಜುಗಳನ್ನು ಹೊಂದಿದೆ. ಬ್ಲ್ಯಾಕ್ ಸ್ಪೋಕ್ ವೀಲ್ಹ್‌ಗಳ ವ್ಯವಸ್ಥೆ ಕೂಡಾ ಇದ್ದು ಚಿತ್ರದಲ್ಲಿ ಹೊಸ ವಿನ್ಯಾಸಗಳನ್ನು ನಾವು ಗುರುತಿಸಬಹುದಾಗಿದೆ.
Powered by Blogger.